Telegram    Join My Telegram      WhatsApp Join My WhatsApp

HAL Recruitment 2026: ಪರೀಕ್ಷೆಯಿಲ್ಲದೆ HAL ನಲ್ಲಿ ಉದ್ಯೋಗ! 205 ಐಟಿಐ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ಸಂದರ್ಶನ

 HAL Recruitment 2026:

ಪರೀಕ್ಷೆಯಿಲ್ಲದೆ HAL ನಲ್ಲಿ ಉದ್ಯೋಗ ಪಡೆಯುವ ಅವಕಾಶ; 205 ಐಟಿಐ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ಸಂದರ್ಶನ

ಐಟಿಐ ಪೂರ್ಣಗೊಳಿಸಿ ಉತ್ತಮ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ದೊಡ್ಡ ಅವಕಾಶ ದೊರಕಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತನ್ನ ಹೈದರಾಬಾದ್‌ನ ಏವಿಯಾನಿಕ್ಸ್ ವಿಭಾಗದಲ್ಲಿ 2026-27ನೇ ಸಾಲಿಗೆ ಒಟ್ಟು 205 ಐಟಿಐ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿಯ ಪ್ರಮುಖ ವಿಶೇಷವೆಂದರೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕವೇ ಆಯ್ಕೆ ಮಾಡಲಾಗುತ್ತದೆ.

ತಾಂತ್ರಿಕ ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ. ವಿವಿಧ ಟ್ರೇಡ್‌ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಯಾವೆಲ್ಲಾ ಟ್ರೇಡ್‌ಗಳಲ್ಲಿ ಹುದ್ದೆಗಳು ಲಭ್ಯ?

HAL ಪ್ರಕಟಿಸಿರುವ ಅಧಿಸೂಚನೆಯ ಪ್ರಕಾರ, ಹಲವಾರು ತಾಂತ್ರಿಕ ವಿಭಾಗಗಳಲ್ಲಿ ಅಪ್ರೆಂಟಿಸ್ ತರಬೇತಿಗೆ ಅವಕಾಶ ಕಲ್ಪಿಸಲಾಗಿದೆ. ಅವುಗಳಲ್ಲಿ:

ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್

ಫಿಟ್ಟರ್

ಎಲೆಕ್ಟ್ರಿಷಿಯನ್

ಮೆಷಿನಿಸ್ಟ್

ಟರ್ನರ್

ವೆಲ್ಡರ್

ರೆಫ್ರಿಜರೇಷನ್ & ಏರ್ ಕಂಡೀಷನಿಂಗ್ (AC)

COPA

ಪ್ಲಂಬರ್

ಪೇಂಟರ್

ಡೀಸೆಲ್ ಮೆಕ್ಯಾನಿಕ್

ಮೋಟಾರ್ ವೆಹಿಕಲ್ ಮೆಕ್ಯಾನಿಕ್

ಡ್ರಾಫ್ಟ್ಸ್‌ಮನ್ (ಸಿವಿಲ್ ಮತ್ತು ಮೆಕ್ಯಾನಿಕಲ್)

ಎಲೆಕ್ಟ್ರೋಪ್ಲೇಟರ್

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು NCVT ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ಟ್ರೇಡ್‌ನಲ್ಲಿ ITI ಪಾಸಾಗಿರಬೇಕು.

ಆಯ್ಕೆಯಾದವರಿಗೆ ಸಿಗುವ ಸೌಲಭ್ಯವೇನು?

ಆಯ್ಕೆಯಾದ ಅಭ್ಯರ್ಥಿಗಳಿಗೆ 1961ರ Apprenticeship Act ಅನ್ವಯ ಮಾಸಿಕ ಶಿಷ್ಯವೇತನ (Stipend) ನೀಡಲಾಗುತ್ತದೆ. ಜೊತೆಗೆ ಪ್ರಮುಖ ಸರ್ಕಾರಿ ಸಂಸ್ಥೆಯಲ್ಲಿ ತರಬೇತಿ ಪಡೆಯುವ ಅವಕಾಶ ಸಿಗುವುದರಿಂದ ಮುಂದಿನ ಉದ್ಯೋಗಾವಕಾಶಗಳಿಗೂ ಸಹಾಯವಾಗಬಹುದು.

ಸಂದರ್ಶನದ ದಿನಾಂಕ ಮತ್ತು ಸಮಯ

ಅಭ್ಯರ್ಥಿಗಳು ತಮ್ಮ ಟ್ರೇಡ್‌ಗೆ ಅನುಗುಣವಾಗಿ ಕೆಳಗಿನ ದಿನಾಂಕಗಳಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬೇಕು:

ಮೇ 28, 2026

ಬೆಳಿಗ್ಗೆ:

ಎಲೆಕ್ಟ್ರಾನಿಕ್ ಮೆಕ್ಯಾನಿಕ್

ಡೀಸೆಲ್ ಮೆಕ್ಯಾನಿಕ್

ಮಧ್ಯಾಹ್ನ:

ಫಿಟ್ಟರ್

ಪ್ಲಂಬರ್

ಪೇಂಟರ್

ಮೇ 29, 2026

ಬೆಳಿಗ್ಗೆ:

COPA

ಮೋಟಾರ್ ವೆಹಿಕಲ್ ಮೆಕ್ಯಾನಿಕ್

ಮಧ್ಯಾಹ್ನ:

ಎಲೆಕ್ಟ್ರಿಷಿಯನ್

ಡ್ರಾಫ್ಟ್ಸ್‌ಮನ್ ಮೆಕ್ಯಾನಿಕಲ್

ಜೂನ್ 1, 2026

ಬೆಳಿಗ್ಗೆ:

ಮೆಷಿನಿಸ್ಟ್

ರೆಫ್ರಿಜರೇಷನ್ & AC

ಮಧ್ಯಾಹ್ನ:

ಡ್ರಾಫ್ಟ್ಸ್‌ಮನ್ ಸಿವಿಲ್

ವೆಲ್ಡರ್

ಎಲೆಕ್ಟ್ರೋಪ್ಲೇಟರ್

ಸಂದರ್ಶನಕ್ಕೆ ತೆಗೆದುಕೊಂಡು ಹೋಗಬೇಕಾದ ದಾಖಲೆಗಳು

ಸಂದರ್ಶನಕ್ಕೆ ಹೋಗುವಾಗ ಅಭ್ಯರ್ಥಿಗಳು ಮೂಲ ದಾಖಲೆಗಳ ಜೊತೆಗೆ ಜೆರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು.

ಅಗತ್ಯ ದಾಖಲೆಗಳು:

ಆಧಾರ್ ಕಾರ್ಡ್

ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ

ITI ಪ್ರಮಾಣಪತ್ರ

ಜಾತಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)

Apprenticeship Portal Registration Copy

ಜನ್ಮ ದಿನಾಂಕ ದೃಢೀಕರಣ ದಾಖಲೆ

ಸಂದರ್ಶನ ನಡೆಯುವ ಸ್ಥಳ

ಉತ್ಸವ್ ಸದನ್ ಆಡಿಟೋರಿಯಂ, HAL ಏವಿಯಾನಿಕ್ಸ್ ವಿಭಾಗ, ಬಾಲನಗರ, ಹೈದರಾಬಾದ್ – 500042

ಅಭ್ಯರ್ಥಿಗಳಿಗೆ ಮುಖ್ಯ ಸೂಚನೆ

ಸಂದರ್ಶನಕ್ಕೆ ತೆರಳುವ ಮೊದಲು ಎಲ್ಲಾ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ ತೆಗೆದುಕೊಂಡು ಹೋಗುವುದು ಅಗತ್ಯ. ಅರ್ಹ ಅಭ್ಯರ್ಥಿಗಳು ತಮ್ಮ ಟ್ರೇಡ್‌ಗೆ ನಿಗದಿಪಡಿಸಿರುವ ದಿನಾಂಕ ಮತ್ತು ಸಮಯವನ್ನು ತಪ್ಪದೆ ಗಮನಿಸಬೇಕು. ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ನೇರ ಸಂದರ್ಶನದ ಮೂಲಕ ಸರ್ಕಾರಿ ಸಂಸ್ಥೆಯಲ್ಲಿ ಅವಕಾಶ ಸಿಗುತ್ತಿರುವುದರಿಂದ, ITI ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದಿರುವುದು ಒಳಿತು.

HAL ನಲ್ಲಿ Apprentice Training ಯಾಕೆ ಮುಖ್ಯ?

HAL ಭಾರತದ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದ ಸರ್ಕಾರಿ ಸಂಸ್ಥೆಗಳಲ್ಲಿ ಒಂದಾಗಿದೆ. ಇಲ್ಲಿ apprenticeship training ಪಡೆದ ಅಭ್ಯರ್ಥಿಗಳಿಗೆ ಕೈಗಾರಿಕಾ ಅನುಭವ (industrial exposure) ಸಿಗುತ್ತದೆ. ವಿಶೇಷವಾಗಿ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಆಟೋಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಟ್ರೇಡ್‌ನ ವಿದ್ಯಾರ್ಥಿಗಳಿಗೆ ಇದು ಭವಿಷ್ಯದ ಉದ್ಯೋಗಾವಕಾಶ ಹೆಚ್ಚಿಸಲು ಸಹಾಯ ಮಾಡುತ್ತದೆ.

ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಅನುಭವಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. HAL ನಲ್ಲಿ training completed certificate ಹೊಂದಿರುವ ಅಭ್ಯರ್ಥಿಗಳಿಗೆ ಮುಂದಿನ ದಿನಗಳಲ್ಲಿ aerospace, manufacturing ಮತ್ತು technical companies ಗಳಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗಬಹುದು.

ಯಾರಿಗೆ ಈ ಅವಕಾಶ ಹೆಚ್ಚು ಉಪಯೋಗ?

ಈ ನೇಮಕಾತಿ ಮುಖ್ಯವಾಗಿ ಕೆಳಗಿನ ಅಭ್ಯರ್ಥಿಗಳಿಗೆ ಉಪಯೋಗವಾಗಲಿದೆ:

ITI ಪೂರ್ಣಗೊಳಿಸಿ ಉದ್ಯೋಗಕ್ಕಾಗಿ ಕಾಯುತ್ತಿರುವವರು

ಹೊಸದಾಗಿ technical field ನಲ್ಲಿ career ಆರಂಭಿಸಲು ಬಯಸುವವರು

Government sector exposure ಬೇಕಿರುವ ಅಭ್ಯರ್ಥಿಗಳು

Apprentice certificate ಪಡೆದು future jobs ಗೆ profile strong ಮಾಡಿಕೊಳ್ಳಲು ಬಯಸುವವರು

Selection Process ಹೇಗಿರುತ್ತದೆ?

ಈ ನೇಮಕಾತಿಯಲ್ಲಿ ಯಾವುದೇ written exam ಇಲ್ಲ. ಸಾಮಾನ್ಯವಾಗಿ ಕೆಳಗಿನ ಅಂಶಗಳನ್ನು ಗಮನಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು:

Documents Verification

Trade ಸಂಬಂಧಿತ basic technical questions

Candidate communication and practical knowledge

ITI marks ಮತ್ತು eligibility verification

ಆದ್ದರಿಂದ interview ಗೆ ಹೋಗುವ ಮೊದಲು basic trade questions revise ಮಾಡಿಕೊಂಡು ಹೋಗುವುದು ಉತ್ತಮ.

Interview ಗೆ ಹೋಗುವ ಮೊದಲು ಈ Tips Follow ಮಾಡಿ

Original documents ಜೊತೆಗೆ xerox copies carry ಮಾಡಿ

Interview location ಗೆ ಕನಿಷ್ಠ 30-45 ನಿಮಿಷ ಮೊದಲು ತಲುಪಿ

Clean ಮತ್ತು professional dress ಧರಿಸಿ

ನಿಮ್ಮ trade basic concepts revise ಮಾಡಿ

Apprenticeship portal registration printout ಮರೆಯಬೇಡಿ

Apprentice ಆದ್ಮೇಲೆ Permanent Job ಸಿಗುತ್ತಾ?

ಬಹಳಷ್ಟು ಅಭ್ಯರ್ಥಿಗಳಿಗೆ ಈ ಪ್ರಶ್ನೆ ಇರುತ್ತದೆ. Apprenticeship completed ಆದ ನಂತರ HAL ನಲ್ಲಿ permanent job guarantee ಇರುವುದಿಲ್ಲ. ಆದರೆ HAL experience ಇರುವ ಅಭ್ಯರ್ಥಿಗಳಿಗೆ ಮುಂದಿನ recruitment, PSU companies, railways, defence manufacturing sectors ನಲ್ಲಿ advantage ಸಿಗಬಹುದು.

ಯಾಕೆ ಈ recruitment special?

ಈ recruitment ನ ದೊಡ್ಡ ವಿಶೇಷತೆ ಎಂದರೆ: ✔️ ಯಾವುದೇ written exam ಇಲ್ಲ

✔️ Direct interview selection

✔️ ಒಟ್ಟು 205 vacancies

✔️ HAL ಮಾದರಿ reputed government company ಯಲ್ಲಿ training ಅವಕಾಶ

✔️ ITI completed ಅಭ್ಯರ್ಥಿಗಳಿಗೆ ಉತ್ತಮ ಅವಕಾಶ

Leave a Comment